ತುಳು ಸಾಹಿತ್ಯ ಪ್ರಕಾರಗಳಲ್ಲಿ ಮೌಖಿಕ ಸಾಹಿತ್ಯವೇ ಹೆಚ್ಚು ಜನಪ್ರಿಯ.ತುಳು ಸಾಹಿತ್ಯದಲ್ಲಿ ಲಿಖಿತ ಸಾಹಿತ್ಯ ಪರಂಪರೆಗಳಿಗಿಂತ ಜನಪದ ಸಾಹಿತ್ಯಗಳೇ ಬಹಳ ಸಂಪದ್ಭರಿತವಾಗಿದ್ದು ಓ ಬೇಲೆ, ಕಬಿತೆ, ಪಾಡ್ದನ, ಸಂಧಿ, ಉರಲ್, ಗಾದೆ , ಒಗಟು ಇತ್ಯಾದಿಗಳು ಬಾಯಿಂದ ಬಾಯಿಗೆ ಹರಿದು ಬಂದವುಗಳಾಗಿವೆ. ಆದರೆ ಇಂದಿನ ಆಧುನಿಕತೆಯ ಗಾಳಿಗೆ ಸಿಕ್ಕಿ ಹಳೆಯ ಸಂಪ್ರದಾಯಗಳು ಮರೆಯಾಗುತ್ತಿದ್ದು .ಕೆಲವೇ ಕೆಲವು ಹಿರಿಯರು ಮಾತ್ರ ಇದನ್ನು ಸರಿಯಾಗಿ.ತಿಳಿದವರಾಗಿದ್ದಾರೆ
ಇಂತಹ ಹಳೆಯ ಸಂಪ್ರದಾಯಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸ ಬೇಕೆಂಬ ದೃಷ್ಟಿಯಿಂದ ವಿಕಿಪೀಡಿಯದಂತಹ ಸಾಮಾಜಿಕ ಜಾಲ ತಾಣಗಳ ಮುಖಾಂತರ ಸಂರಕ್ಷಿಸ ಬೇಕೆಂದು ಪ್ರಯತ್ನಿಸಿಸುವ ನಮಗೆ ಸಿಕ್ಕಿರುವ ಜಾನಪದ ಸಾಹಿತಿಗಳು ಚನಿಯರು, ಲಕ್ಷ್ಮಿ, ಹಾಗೂ ಸೀತು ಎಂಬ ಹಿರಿಯ ತಲೆಗಳು.ಬಹಳಷ್ಟು ಪಾಡ್ದನಗಳ ಖಜಾನೆ ಇವರಲ್ಲಿ ಇರುವುದು ಇವರ ವೈಶಿಷ್ಟ್ಯ.ಯಾವುದೇ ಲಿಖಿತ ಸಾಹಿತ್ಯ ಇಲ್ಲದೆ ಅದೆಷ್ಟೋ ಓ ಬೇಲೆ ಪದಗಳನ್ನು, ಕಬಿತೆಗಳನ್ನು ,ಪಾಡ್ದನಗಳನ್ನು ಸರಾಗವಾಗಿ ಬಾಯ್ದೆರೆಯಾಗಿ ಹೇಳುವ ಇವರ ಪ್ರತಿಭೆ ಅತ್ಯದ್ಭುತವಾದುದು.ಬೇರೆ ಬೇರೆ ಪ್ರಕಾರದ ಕಥಾ ವಸ್ತುವನ್ನೊಳಗೊಂಡ ಪಾಡ್ದನಗಳನ್ನು ಇವರು ಹೇಳುತ್ತಾ,ರೆ.ಅದರಲ್ಲಿ ದೈವದ ಪಾಡ್ದನ , ಪ್ರಾಣಿ ಪಕ್ಷಿಗಳ ಬಗ್ಗೆಗಿನ ಪಾಡ್ದನ,ವೀರರ ಪಾಡ್ದನ, ಜನಪದ ಕ್ರೀಡೆಗಳ ಪಾಡ್ದನಗಳು ಒಳಗೊಂಡಿವೆ.
ಮಂಜು ಪೂಂಜ ಪಾಡ್ದನ. ವೀಡಿಯೊ: Kavitha G. Kana (CC BY SA 4.0)
ಬತ್ತದ ಗದ್ದೆಯಲ್ಲಿ ಬೆಳೆ ಕೊಯ್ಲು ಸಮಯದಲ್ಲಿ ಹಾಡುವ ತುಳು ಜಾನಪದ ಗೀತೆ. ವೀಡಿಯೊ: Kishore Kumar Rai (CC BY SA 4.0)
ಮಂಜುಪೂಂಜ ಪಾಡ್ದನದಲ್ಲಿ ಬಾಲಕ ಮಂಜು ಪೂಂಜನಿಗೆ ತನ್ನ ಮಾವನೊಂದಿಗೆ ವಾಸಿಸಲು ಇಷ್ಟ ಇಲ್ಲದೆ ಮನೆ ಬಿಟ್ಟು ಬೇರೆ ಕಡೆಗೆ ಹೋಗಿ ಅಲ್ಲಿ ಕೃಷಿ ಕೆಲಸದಲ್ಲಿ ತೊಡಗಿಕೊಂಡಿರುವುದನ್ನು ವರ್ಣಿಸಲಾಗಿದೆ.
ಚನಿಯರು ಹಾಗೂ ಸೀತು ಹಾಡಿದ ಮಂಜುಪೂಂಜ ಪಾಡ್ದನ
ಓ ಸಲ್ಲ್‌ಜೇ ಪೂಂಜೆರೆಗ್ ಓ ಸಲ್ಲ್‌ಜೇ ಪೂಂಜೆರೆಗ್
ಓ ಬಂಟೊಡೊರಿ ಬಾಲೆ ಮಂಜು ಪೂಂಜೆರೆಗ್‌ಯೇ
ಓ ಸಲ್ಲ್‌ಜೆಮ್ಮ ಪೂಂಜೆರೆಗ್ ಸಲ್ಲ್‌ಜೀ ಅವುಲು
ಆವುಲು ಬಂಟೊಡೊರಿ ಬಾಲೆ ಮಂಜು ಪೂಂಜೆರೊಯಾ
ಒಲೊಂಜಿ ಮಾಡಡಿ ಒಂಜಿ ಕುಬಲಡಿ ಓ ಸಲ್ಲನ ಕಾಲೊಡು
ಓ ಸಮ್ಮಲೆ ಅರ್ವತ್ತಗ್ ಸಲ್ಲ್‌ಜಿಯೆ
.ಈ ಪಾಡ್ದನದಲ್ಲಿ ಬೇರೆ ಬೇರೆ ಹೂವನ್ನು ಅದರ ಅಂದ ಚಂದವನ್ನು ವರ್ಣಿಸಿ ಹೆಣ್ಣೊಬ್ಬಳು ಮುಡಿಯ ಬೇಕೆಂಬ ಆಶಯವನ್ನು ವ್ಯಕ್ತಪಡಿಸಲಾಗಿದೆ.
ಲಕ್ಷ್ಮಿಯವರು ಹಾಡಿದ – ಹೆಣ್ಣೊಬ್ಬಳು ಹೂವನ್ನು ಮುಡಿಯ ಬೇಕೆಂಬ ಆಶಯವನ್ನು ವ್ಯಕ್ತಪಡಿಸುವ ಕಬಿತೆ ತುಳು ಭಾಷೆಯಲ್ಲಿ
ಪೂವುಟು ಪೂವು ಪೊರ್ಲು ಸಿಂಗೆರಿಮಾಲೆ---
ಪೊಣ್ಣು ದಾಯ್ತೊನೊಂಜಿ ಪೂವು ಪೊರ್ಲು ಸಿಂಗೆರಿಮ್ಮಲೊ-----
ಅವ್ವೊಂಜಿ ಪೂವುನು ಕೊಯ್ಯೊನು ಬಲ ಸಿಂಗೆರಿಮ್ಮಲೊ---
ತರೆಬಾರ್ ಪೂವು ಮುಡಿಪು ಸಿಂಗೆರಿಮ್ಮಲೊ----
ದಾಯ್ತೊನೊಂಜಿ ಪೂವು ಪೊರ್ಲು ಸಿಂಗೆರಿಮ್ಮಲೊ----
ಮಲ್ಲಿಗೆತ ಪೂವು ಪೊರ್ಲು ಸಿಂಗೆರಿಮ್ಮಲೊ-----
ಅವ್ವೊಂಜಿ ಪೂವುನು ಕೊಯ್ಯೊನು ಬಲ ಸಿಂಗೆರಿಮ್ಮಲೊ----
ತರೆಬಾರ್ ಪೂವು ಮುಡಿಪು ಸಿಂಗೆರಿಮ್ಮಲೊ-----
ಪೂಟು ಪೂವು ಪೊರ್ಲು ಸಿಂಗೆರಿಮಾಲೊ -----
ದಾಯ್ತೊನೊಂಜಿ ಪೂವು ಪೊರ್ಲು ಸಿಂಗೆರಿಮ್ಮಲೊ----
ಅಬ್ಬಲ್ಲಿಗೆ ಪೂ ಪೊರ್ಲು ಸಿಂಗೆರಿಮಾಲೊ-------
ಅವ್ವೊಂಜಿ ಪೂವುನು ಕೊಯ್ಯೊನು ಬಲ ಸಿಂಗೆರಿಮ್ಮಲೊ---
ತರೆಬಾರ್‌ತ್ ಪೂವು ಮುಡಿಪು ಸಿಂಗೆರಿಮ್ಮಲೊ----
ಕಂಬಲ ಪಾಡ್ದನದಲ್ಲಿ ಎತ್ತುಗಳಿಗೆಳ ತಿನ್ನಲು ಹಾಕಿ ಅವುಗಳನ್ನು ಸಿಂಗರಿಸಿ ಕಂಬಲಕ್ಕೆ ತೆಗೆದು ಕೊಂಡು ಹೋಗುವುದನ್ನು ಬಹಳ ಸೊಗಸಾಗಿ ವರ್ಣಿಸಲಾಗಿದೆ.
ಚನಿಯರು ಹಾಡಿದ ಕಂಬಲ ಪಾಡ್ದನ
ನಮ್ಮೂರ ಕಂಬುಲಗೇ ಓ ಮಾಯಿಲ ಇಟ್ಟೆಲಳೆರು ಬರ್ಪುಂಡುಯಾ
ಇಟ್ಟೆಲಳೆರು ಬನ್ನಗ ಓ ಮಾಯಿಲ ನಮ್ಮ ಬೊಲ್ಲೆ ಮೆಡ್ಲ್ ದೆಪ್ಪೊಡೇ
ಓ ಲೇ ಲೇ ಲೇಲೇಲೋ ಓ ಮಾಯಿಲ ಲೇ ಲೇ ಲೇಲೇಲಾ
ಓ ಉಲ್ಲಾಯೇ ಲೆತ್ತೆರ್ಂದ್ ಓ ದೆಕ್ಕೊಲು ಲೆತ್ತೆರ್ಂದ್
ಓ ಮಾಯಿಲ ದಾಯಿತ ಬೇಲೆಂದ್ ಕೇನ್‌ಲಯಾ
ಓ ಲೇ ಲೇ ಲೇಲೇಲೋ ಓ ಮಾಯಿಲ ಲೇ ಲೇ ಲೇಲೇಲಾ
ಅದೇ ರೀತಿ ಕೋಟಿ ಚೆನ್ನಯ ಪಾಡ್ದನದಲ್ಲಿ ಅವಳಿ ವೀರರಾದ ಕೋಟಿ ಚೆನ್ನಯರು ಅನ್ಯಾಯದ ವಿರುದ್ಧ ಸೆಟೆದು ನಿಂತ ಪರಿಯನ್ನು ಬಹಳ ಸೊಗಸಾಗಿ ಹೇಳುತ್ತಾರೆ.ಹೀಗೆಯೇ ಸತ್ಯನಾಪುರತ ಸಿರಿಪಾಡ್ದನ ,ದೇಯಿಬೈದೆತಿ ಪಾಡ್ದನ ,ಮಯಿಸಂದಾಯ ಪಾಡ್ದನ ಹಾಗೂ ಇನ್ನಿತರ ಹಲವಾರು ಪಾಡ್ದನಗಳನ್ನು ವಿಕಿಪೀಡಿಯ ಪುಟದಲ್ಲಿ ದಾಖಲಿಸುವ ಕೆಲಸವಾಗಿದೆ.
ಪಾಡ್ದನಗಳ ಉದ್ದೇಶ
ಪಾಡ್ದನಗಳನ್ನು ಹಾಡುವುದು ಮನೋರಂಜನೆಗಾಗಿಯಾದರೂ ಅದರಲ್ಲಿ ಬಹಳಷ್ಟು ಅಶಯಗಳು ಒಳಗೊಂಡಿವೆ .ನೇರವಾಗಿ ಹೇಳಲಾಗದ ವಿಷಯವನ್ನು ಪಾಡ್ದನಗಳ ರೂಪದಲ್ಲಿ ಹಾಡಿ ವ್ಯಕ್ತ ಪಡಿಸಲಾಗುತ್ತದೆ. ದೈವದ ಪಾಡ್ದನಗಳಲ್ಲಿ ದೈವದ ಹುಟ್ಟು, ಕಾರಣಿಕದ ಕಥೆಗಳು ಒಳಗೊಂಡಿವೆ. ಅದೇ ರೀತಿ ಕಂಬಲದ ಪಾಡ್ದನದಲ್ಲಿ ಕೋಣಗಳನ್ನು ಯಾವ ರೀತಿ ಸಾಕ ಬೇಕೆಂಬ ವಿಷಯವನ್ನು ವರ್ಣಿಸಲಾಗಿದೆ. ಹೀಗೆ ಬೇರೆ ಬೇರೆ ಸಂದರ್ಭದಲ್ಲಿ ಪಾಡ್ದನಗಳನ್ನು ಹಾಡಲಾಗುತ್ತದೆ.
ಪಾಡ್ದನಗಳೆಲ್ಲ ಬಾಯಿಂದ ಬಾಯಿಗೆ ಹರಿದು ಬಂದ ಮೌಖಿಕ ಸಾಹಿತ್ಯ ಪ್ರಕಾರವಾಗಿದ್ದು ಇತ್ತೀಚೆಗೆ ಇದರ ಬಳಕೆ ಕಡಿಮೆಯಾಗಿರುವ ಕಾರಣ ಅದು ಇನ್ನು ಕೆಲವೇ ಕೆಲವು ಸಮಯದಲ್ಲಿ ನಶಿಸಿ ಹೋಗುವ ಹಂತಕ್ಕೆ ತಲುಪಿರುವಾಗ ಅದನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಾನು ಹಾಗು ನನ್ನ ಗುಂಪಿನ ಕವಿತಾ, ಬಬಿತಾ, ಕಿಶೋರ್ ನಾವೆಲ್ಲ ಸೇರಿಕೊಂಡು ಪಾಡ್ದನ ಹೇಳುವ ಜನಪದ ಕಲಾವಿದರನ್ನು ಸಂಪರ್ಕಿಸಿ ವೀಡಿಯೋ ರೆಕಾರ್ಡ್ ಮಾಡಿ ವಿಕಿ ಜಾಲತಾಣವಾದ ವಿಕಿ ಕಾಮನ್ಸ್ ಗೆ ಅಪ್‌ಲೋಡು ಮಾಡುವ ಪ್ರಯತ್ನ ಮಾಡಿದೆವು. ಇಂತಹ ಒಂದು ಅಪರೂಪದ ಕಲೆಯನ್ನು ಉಳಿಸುವ ಪ್ರಯತ್ನದಲ್ಲಿ ಕೈಜೋಡಿಸಿರುವುದು ಹೆಮ್ಮೆ, ಖುಷಿಯ ವಿಚಾರ.
✍️ ಬ್ಲಾಗ್ ಲೇಖಕರು
ವಿನೋಧ ಮಮತಾ ರೈ, ಕನ್ನಡ ಮತ್ತು ತುಳು ವಿಕಿಮೀಡಿಯ ಯೋಜನೆಗಳಲ್ಲಿ ಸಕ್ರಿಯ ಸದಸ್ಯರು.

Can you help us translate this article?
In order for this article to reach as many people as possible we would like your help. Can you translate this article to get the message out?
Start translation